ಕೌಮುದಿ

ತಿರುವನಂತಪುರದಿಂದ ಪ್ರಕಟವಾಗುವ ಮಲಯಾಳಂ ದಿನಪತ್ರಿಕೆ, ವಾರಪತ್ರಿಕೆ. ದಿನಪತ್ರಿಕೆ 1957ರಲ್ಲಿ ಪ್ರಾರಂಭವಾಯಿತು. ಕೆ.ಎಂ.ಪದ್ಮನಾಭ ಪಿಳ್ಳೆ ಸಂಪಾದಕ. ಸುಲಭ ಬೆಲೆಯ, ಜನಪ್ರಿಯವಾದ ಪತ್ರಿಕೆ. ವಾರಪತ್ರಿಕೆ ಸಾಹಿತ್ಯಕ ಮತ್ತು ಸಾಂಸ್ಕøತಿಕ ವಿಷಯಗಳಿಗೆ ಮೀಸಲಾದ್ದು. ಆ ಪತ್ರಿಕೆಯ ಪ್ರಕಾಶಕ, ಮುದ್ರಕ, ಮಾಲೀಕ ಮತ್ತು ಸಂಪಾದಕ ಬಾಲಕೃಷ್ಣನ್. 
											(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ